Kannada Actor Puneeth Rajkumar fans are against the release of Dubbing (Tamil to Kannada) Film 'Dheera', which has hit the screens today in Bengaluru.
ಡಬ್ಬಿಂಗ್ 'ಧೀರ'ನಿಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಫುಲ್ ಕ್ಲಾಸ್! 'ಡಬ್ಬಿಂಗ್' ಬೇಕು ಬೇಡ ಎಂಬ ವಿರೋಧಗಳ ನಡುವೆ.... 'ಡಬ್ಬಿಂಗ್' ಚಿತ್ರಗಳಿಗೆ ವಿರೋಧ ಮಾಡುವಂತಿಲ್ಲ ಅಂತ ಕೋರ್ಟ್ ನಿಂದ ಆದೇಶ ಬಂದಾಯ್ತು. ಆದ್ರೆ ''ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಮಗೆ ಡಬ್ಬಿಂಗ್ ಸಿನಿಮಾ ಬೇಡವೇ ಬೇಡ'' ಎನ್ನುವ ಅಭಿಮಾನಿಗಳೇ ಹೆಚ್ಚು. ಇವರುಗಳ ಮಧ್ಯೆ ಕೆಲ ಕನ್ನಡದ ನಿರ್ಮಾಪಕರೇ ತಮಿಳು-ತೆಲುಗಿನಲ್ಲಿ ಹಿಟ್ ಆಗಿರುವ ಚಿತ್ರಗಳನ್ನ ಡಬ್ಬಿಂಗ್ ಮಾಡಿ ರಾಜ್ಯದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದ್ರೆ, ಡಬ್ಬಿಂಗ್ ಸಿನಿಮಾಗಳನ್ನ ಧೈರ್ಯವಿದ್ದರೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅಂತ ಕನ್ನಡಿಗರು ಸವಾಲು ಹಾಕಿದರು. ಅದರಂತೆಯೇ ಡಬ್ಬಿಂಗ್ ಸಿನಿಮಾ ಬೆಂಗಳೂರಿನ ಯಾವ ಚಿತ್ರಮಂದಿರದಲ್ಲೂ ತೆರೆಗೆ ಬರಲಿಲ್ಲ. ಈಗ ಸದ್ದಿಲ್ಲದೆ ಇಂದು ಬೆಂಗಳೂರಿನಲ್ಲೇ ಡಬ್ಬಿಂಗ್ ಚಿತ್ರ ರಿಲೀಸ್ ಆಗಿದೆ. ಇದನ್ನ ಗಮನಿಸಿರುವ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳು ಚಿತ್ರತಂಡದ ವಿರುದ್ದ ಸಿಡಿದೆದ್ದಿದ್ದಾರೆ.